ಅಂತರಘಟ್ಟೆ ದೇಗುಲದ ಸ್ವಚ್ಚತೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ತರೀಕೆರೆ ಎಸಿ ಕಾಂತರಾಜ್

ಸುದ್ದಿಕಡೂರು : ತಾಲ್ಲೂಕಿನ ಅಂತರಘಟ್ಟೆ ಗ್ರಾಮದ ಶ್ರೀ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವವು ಸಂಪನ್ನಗೊAಡ ಬಳಿಕ ದೇವಾಲಯದ ಆವರಣವು ಸ್ವಚ್ಚತೆ ಇಲ್ಲದೆ ಮಲೀನಗೊಂಡಿದ್ದ ಹಿನ್ನಲ್ಲೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ದೇಗುಲಕ್ಕೆ ಖುದ್ದು ಭೇಟಿ ನೀಡಿದ ತರೀಕೆರೆ ಎಸಿ ಕಾಂತರಾಜ್ ಸೋಮವಾರ ಅಧಿಕಾರಿಗಳಿಗೆ ತಾಕೀತು ಮಾಡಿ ಕೂಡಲೇ ದೇಗುಲದ ಆವರಣವನ್ನು ಸಿಬ್ಬಂದಿಗಳಿ೦ದ ಶುಚಿಗೊಳಿಸಲಾಯಿತು.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯವು ಕಳೆದ ಒಂದು ವಾರದಿಂದ ಜಾತ್ರಾಮಹೋತ್ಸವದ ಆಚರಣೆ ನಡೆಸಿದ ಹಿನ್ನಲೆಯಲ್ಲಿ ಭಕ್ತರು ಅರ್ಪಿಸಿದ್ದ ಹೂವು ಮತ್ತು ಪೂಜಾ ಸಾಮಾಗ್ರಿಗಳನ್ನು ಸರಿಯಾಗಿ ನಿರ್ವಹಣೆ ಇಲ್ಲದೆ ಎಲ್ಲಂದರಲ್ಲೇ ಬಿಸಾಡಲಾಗಿತ್ತು. ದೇವಾಲಯದ ಪ್ರಾಂಗಣ ಮತ್ತು ಸುತ್ತುಮುತ್ತಲ ಪರಿಸರವು ಪ್ಲಾಸ್ಟಿಕ್ ಮತ್ತು ಕುರಿ-ಕೋಳಿಗಳ ತಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಇದನ್ನು ಮನಗಂಡ ತರೀಕೆರೆ ಎಸಿ ಕಾಂತರಾಜು ದೇವಾಲಯದ ಪರಿಸರದ ಶುಚಿತ್ವ ಕಾಪಾಡಲು ನಿರ್ಲಕ್ಷö್ಯ ವಹಿಸಿದ್ದ ಕಂದಾಯವಿಭಾಗದ ಅಧಿಕಾರಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳ ವಿರುದ್ದ ಹರಿಹಾಯ್ದು ಕೂಡಲೇ ಆವರಣದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸುವಂತೆ ನಿರ್ದೇಶಿಸಿ ಸ್ವತಃ ಸಿಬ್ಬಂದಿಗಳ ಜೊತೆ ಎರಡು ತಾಸಿಗೂ ಹೆಚ್ಚು ಕಾಲ ಸ್ವಚ್ಚತೆಯಲ್ಲಿ ಕೈಜೋಡಿಸಿದರು.
ಈ ಸಂದರ್ಭದಲ್ಲಿ ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ಕಂದಾಯ ನಿರೀಕ್ಷಕ ಗಿರೀಶ್, ಅಂತರಘಟ್ಟೆ ಗ್ರಾಪಂ ಅಧ್ಯಕ್ಷ ಅಂಜನಪ್ಪ ಉಪಾಧ್ಯಕ್ಷೆ ಸವಿತಾ ಪಾಟೀಲ್ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

 

Leave a Reply

Your email address will not be published. Required fields are marked *

error: Content is protected !!