ಜನಪರಕಾರ್ಯಕ್ರಮಗಳ ಹರಿಕಾರ ಬಿ.ಎಸ್.ಯಡಿಯೂರಪ್ಪ : ಕೆ.ಆರ್.ಮಹೇಶ್‌ಒಡೆಯರ್

ಸುದ್ದಿ ಕಡೂರು : ಹಲವು ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಆಡಳಿತ ನೀಡುವ ಮೂಲಕ ನಿರಂತರ ರೈತರು, ಬಡವರ ಬಗ್ಗೆ ಕಾಳಜಿಗೆ ಮಿಡಿದವರು ಜನಪರ ಕಾರ್ಯಕ್ರಮ ಹರಿಕಾರರಾಗಿ ಯಡಿಯೂರಪ್ಪ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್. ಮಹೇಶ್‌ಒಡೆಯರ್ ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಮಂಡಲದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಒಳರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭಾಜಪದ ಅಸಂಖ್ಯಾತ ಕಾರ್ಯಕರ್ತರ ಸ್ಪೂರ್ತಿಯ ಚಿಲುಮೆಯಾಗಿರುವ ರೈತ ನಾಯಕ ಯಡಿಯೂರಪ್ಪ ಅವರಿಗೂ ಕಡೂರಿಗೂ ಅವಿನಾಭಾವ ಸಂಬಂಧದ ಫಲವಾಗಿ ಬಿಜೆಪಿ ಸರಕಾರದ ಆಡಳಿತದಲ್ಲಿ ಕಡೂರು ಕ್ಷೇತ್ರ ಅಭಿವೃದ್ದಿಯತ್ತ ದಾಪುಗಾಲು ಇಡಲು ಸಾಧ್ಯವಾಯಿತು. ಕ್ಷೇತ್ರದಲ್ಲಿ ಬೆಳ್ಳಿಪ್ರಕಾಶ್ ಶಾಸಕರಾಗಿ ಅಭಿವೃದ್ದಿ ದೃಷ್ಟಿಕೋನದ ಒಂದು ಆಯಾಮದ ಜೊತೆಗೆ ಮಾನಸಪುತ್ರ ಬೆಳ್ಳಿಪ್ರಕಾಶ್ ಅವರಿಗೂ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ದೊರಕಿಸಿಕೊಡುವ ಮೂಲಕ ಕ್ಷೇತ್ರಕ್ಕೆ ನಮ್ಮಂತಹ ಕಾರ್ಯಕರ್ತರಿಗೆ ಒಂದು ಶಕ್ತಿಯಾಗಿ ರೂಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿ. ಅವರ ಆಡಳಿತದ ಅವಧಿಯಲ್ಲಿ ಕಡೂರು ಕ್ಷೇತ್ರಕ್ಕೆ ಭದ್ರಾ ಉಪಕಣಿವೆ ಹಾಗೂ ಅಂತರ್ಜಲ ವೃದ್ದಿಗೆ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಉಮೇಶ್, ಬಿಜೆಪಿ ಮುಖಂಡರಾದ ಶೂದ್ರ ಶ್ರೀನಿವಾಸ್, ಹುಲ್ಲೇಹಳ್ಳಿ ಲಕ್ಷö್ಮಣ್, ಸುರೇಶ್, ಕಡೂರಹಳ್ಳಿ ಪ್ರಶಾಂತ್, ಗಂಗರಾಜ್, ರುದ್ರಪ್ಪ, ಅಜೇಯ್‌ಒಡೆಯರ್, ಸಗನಪ್ಪ, ಕಸುವನಹಳ್ಳಿ ಬಸವರಾಜ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!