ಕಡೂರು ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಹೋಚಿಹಳ್ಳಿ ಭೋಗಪ್ಪ ಅಯ್ಕೆ

ಸುದ್ದಿ ಕಡೂರು : ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಹೋಚಿಹಳ್ಳಿ ಭೋಗಪ್ಪ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರಾಗಿದ್ದ ಕೆ.ಎಚ್.ಎ.ಪ್ರಸನ್ನ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಮಾಜದ ಮುಖಂಡರು ಪಟ್ಟಣದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಬಳಿಕ ಸಭೆಯಲ್ಲಿ ಶಾಸಕ ಕೆ.ಎಸ್. ಆನಂದ್ ಮಾತನಾಡಿ, ತಾಲ್ಲೂಕಿನ ಕುರುಬ ಸಮಾಜವು ಎಲ್ಲ ಸಮಾಜಗಳೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕು ಸಮಾಜಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿರುವ ಸಮಿತಿಯು ಸಮಾಜದ ಸಂಘಟನೆಯಲ್ಲಿ ಕಟಿಬದ್ದರಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.

ಮಾಜಿ ಅಧ್ಯಕ್ಷ ಕೆ.ಎಚ್.ಎ.‌ಪ್ರಸನ್ನ ಮಾತನಾಡಿ, ಕಳೆದ ನಾಲ್ಕು ವರ್ಷಕ್ಕು ಹೆಚ್ಚುಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಮಾಜದ ಪ್ರತಿಯೊಬ್ಬ ಸದಸ್ಯರು ಸಮಾಜದ ಬೆಳವಣಿಗೆಗೆ ಕೈ ಜೋಡಿಸುವ ಮೂಲಕ ಹೆಚ್ಚಿನ ಸಹಕಾರ ನೀಡಿದ್ದಾರೆ. ನೂತನ ಸಮಿತಿಯು ಮತ್ತಷ್ಟು ಕಾರ್ಯನಿರ್ವಹಿಸಲು ಬೆಂಬಲ ನೀಡಲಾಗುತ್ತದೆ ಎಂದರು.

ನೂತನ ತಾಲ್ಲೂಕು ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ಮಾತನಾಡಿ, ಸಮಾಜದ ಎಲ್ಲರ ಸಲಹೆ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು, ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ 2023-24ಸಾಲಿನ ಕನಕ ಜಯಂತಿ ಆಚರಣಾ ಸಮಿತಿಗೆ ಪುರಸಭಾ ಸದಸ್ಯತೋಟದ‌‌ಮನೆ ಮೋಹನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಕೆ.ಎಚ್.ಎ.ಪ್ರಸನ್ನ, ಭಂಡಾರಿಶ್ರೀನಿವಾಸ್(ಗೌರವಾಧ್ಯಕ್ಷರು), ಕೆ.ಎಚ್. ಶಂಕರ್ (ಪ್ರಧಾನ ಕಾರ್ಯದರ್ಶಿ),  ಕೆ. ಜಿ. ಶ್ರೀನಿವಾಸ್ ಮೂರ್ತಿ,  ಕೋಡಿಹಳ್ಳಿ ಮಹೇಶ್ವರಪ್ಪ (ಉಪಾಧ್ಯಕ್ಷರು) ತಾಲ್ಲೂಕು ಘಟಕದ

ಪದಾಧಿಕಾರಿಗಳಾಗಿ ಆಯ್ಕೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್,

ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಸಮಾಜದ ಮುಖಂಡರಾದ ಜಿ.ರೇವಣ್ಣ,

 ಭರತ್ ಕೆಂಪರಾಜ್, ಕೆ.ಬಿ.ಸೋಮೇಶ್, ಸೋಮಶೇಖರ್, ತಿಪ್ಪೇಶ್, ಸಿದ್ದಪ್ಪ, ಗೋವಿಂದಪ್ಪ, ಕೆ.ಆರ್.ಸುರೇಶ್, ಕೆ.ಎಂ. ಶಾಂತಪ್ಪ, ಮರುಗುದ್ದಿ ಮನು, ಕೆ.ಜಿ. ಲೋಕೇಶ್ವರ್, ಯರದಕೆರೆ ಓಂಕಾರ್, ಅವಿನಾಶ್, ಸವಿತಾ ರಮೇಶ್, ಕೊನೆಮನೆ ರವಿ, ಶ್ರೀನಿವಾಸ್, ಚಂದ್ರಪ್ಪ, ಧರ್ಮರಾಜ್,

ಸುರೇಶ್, ರಂಗನಾಥ್, ಕರಿಬಡ್ಡೆ ರಾಜು ಮತ್ತಿತರಿದ್ದರು‌.

Leave a Reply

Your email address will not be published. Required fields are marked *

error: Content is protected !!