ಸುದ್ದಿ : ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭಾನುವಾರ ಸಂಭ್ರಮ ಮನೆ ಮಾಡಲು ವಿಶ್ವ ಕ್ರಿಕೆಟ್ ನ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದ ಸಿಹಿಯನ್ನು ನೀಡಿದ್ದಾರೆ.ಭಾನುವಾರ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯವಾದ್ದದ್ದು ಅಭಿಮಾನಿಗಳು ಸಂಭ್ರಮ ಹಂಚಿಕೊಂಡಿದ್ದಾರೆ.