ನವೆಂಬರ್‌ ಮಾಹೆಯ ಪಡಿತರ ಬಿಡುಗಡೆ

ಚಿಕ್ಕಮಗಳೂರು ಸುದ್ದಿ : ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನವೆಂಬರ್ 2023ರ ಮಾಹೆಯ ಪಡಿತರ ಬಿಡುಗಡೆ ಮಾಡಲಾಗಿದೆ.
ಎನ್.ಎಫ್.ಎಸ್.ಎ. ಅಡಿ ರಾಗಿ ಹಂಚಿಕೆ ಇರುವ ತಾಲ್ಲೂಕುಗಳಲ್ಲಿ (ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ) ಪ್ರತಿ ಎಎವೈ(ಅಂತ್ಯೋದಯ) ಕಾರ್ಡಿಗೆ 21 ಕೆ.ಜಿ ಅಕ್ಕಿ, 14 ಕೆ.ಜಿ ರಾಗಿ, ಪಿಹೆಚ್‌ಹೆಚ್(ಆದ್ಯತಾ)  ಪ್ರತಿ ಸದಸ್ಯರಿಗೆ 3 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ ಹಾಗೂ ರಾಗಿ ಹಂಚಿಕೆ ಇಲ್ಲದ ತಾಲ್ಲೂಕುಗಳಲ್ಲಿ (ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ) ಪ್ರತಿ ಎಎವೈ(ಅಂತ್ಯೋದಯ) ಕಾರ್ಡಿಗೆ 35 ಕೆ.ಜಿ. ಅಕ್ಕಿ, ಪಿಹೆಚ್‌ಹೆಚ್(ಆದ್ಯತಾ)  ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ, ಎನ್‌ಪಿಹೆಚ್‌ಹೆಚ್(ಆದ್ಯತೇತರ) ಏಕ ಸದಸ್ಯರ ಪಡಿತರ ಚೀಟಿಗೆ 5 ಕೆ.ಜಿ,  ಎರಡು ಮತು  ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು.
ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!