ಕುಪ್ಪಾಳು ವಸತಿ ಶಾಲೆ ಪ್ರಕರಣ ಇಡೀ ಮನುಕುಲವೇ ತಲೆತಗ್ಗಿಸುವಂತಾಗಿದೆ -ಕೆ.ಎಸ್.ಆನಂದ್

ಸುದ್ದಿ ಕಡೂರು : ತಾಲ್ಲೂಕಿನ ಅಂಚೆಚೋಮನಹಳ್ಳಿ ಸಮೀಪದ ಕುಪ್ಪಾಳು ಮೂರಾರ್ಜಿ ವಸತಿ ಶಾಲೆಗೆ ಶಾಸಕ ಕೆ.ಎಸ್.ಆನಂದ್  ಖುದ್ದು ಭೇಟಿ ನೀಡಿ ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.
ಶಾಲೆಯ ಪಾಕಶಾಲೆ, ಹಾಸ್ಟೆಲ್ ಸುತ್ತಮುತ್ತಲ ಪರಿಸರವನ್ನು ವೀಕ್ಷಿಸಿ ಬಳಿಕ ವಸತಿ ನಿಲಯದ ಮೇಲ್ವಿಚಾರಕರಿಂದ ಮಕ್ಕಳ ಮಾಹಿತಿ ಪಡೆದು ಕೊಂಡರು. ಈ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು ಶಾಸಕ ಆನಂದ್ ಅವರ ಬಳಿ ಪ್ರಾಂಶುಪಾಲರ ಬಗ್ಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಆಪಾದನೆಗಳ ಸುರಿಮಳೆಯನ್ನೇ ಸುರಿಸಿದರು. ಇಲ್ಲಿ ನಡೆದಿರುವ ಪ್ರಕರಣಗಳ ಹಲವಾರು ಅಪಸ್ವರಗಳಿಗೆ ಇವರೇ ಕಾರಣ. ಬೇಜವಾಬ್ದಾರಿ ಯಿಂದ ವರ್ತಿಸುತ್ತಿರುವ ಅವರು ಕಳೆದ 12 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಕೂಡಲೇ ಬದಲಾಯಿಸಬೇಕು. ಇಲ್ಲಿ ನಡೆದಿರುವ ಘಟನೆಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಇಲ್ಲಿನ ವಸತಿ ಶಾಲೆ ಜಿಲ್ಲೆಯಲ್ಲೇ ಒಳ್ಳೆಯ ಹೆಸರು ಪಡೆದಿದೆ. ಅದು ಮತ್ತಷ್ಟು ಹೆಚ್ಚಾಗಬೇಕು. ಇಲ್ಲಿ ಯಗಟಿ ಶಾಲೆಯ ಮಕ್ಕಳೂ ಕೂಡ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿನ ಶಾಲೆಗೆ ಸೂಕ್ತ ಕಟ್ಟಡವಾದರೆ ಇಲ್ಲಿ ಒಂದಿಷ್ಟು ಒತ್ತಡ ಕಡಿಮೆಯಾಗುತ್ತದೆ. ಈ ವಿಚಾರ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಯಾರದೇ ತಪ್ಪಿದ್ದರೂ ಕಾನೂನಿನ ಪ್ರಕಾರ ಕ್ರಮ ಜರುಗುವುದರಲ್ಲಿ ಅನುಮಾನವಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕೆಂಬ ನಿಟ್ಟಿನಲ್ಲಿ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಎರಡು ಶಾಲೆಯ ವಿದ್ಯಾರ್ಥಿಗಳಿರುವುದರಿಂದ ಬಹಳ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕೂಡಲೇ ಯಗಟಿ ಶಾಲೆಯ ವಿದ್ಯಾರ್ಥಿಗಳನ್ನು ಈ ಶಾಲೆಯಿಂದ ಸ್ಥಳಾಂತರಿಸಬೇಕು. ಶೀಘ್ರವೇ ಈ ಶಾಲೆಯಲ್ಲಿ ಪೋಷಕರ ಮತ್ತು ಅಧಿಕಾರಿಗಳ ಸಭೆ ನಡೆಸಬೇಕು. ಜನಗಳಲ್ಲಿ ಮೂಡಿರುವ ಅಪನಂಬಿಕೆಯನ್ನು ಹೋಗಲಾಡಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಸ್ಥಳದಲ್ಲೇ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಹಾಗೂ ಬಿಸಿಎಂ ಇಲಾಖೆಯ ಉಪನಿರ್ದೇಶಕ  ವೈ. ಸೋಮಶೇಖರ್ ಅವರಿಗೆ ದೂರವಾಣಿ ಮೂಲಕ ನಿರ್ದೇಶಿಸಿದರು.ಈ ಸಂದರ್ಭದಲ್ಲಿ ಅಂಚೇಚೋಮನಹಳ್ಳಿ ಗ್ರಾಮದ ಸೋಮಣ್ಣ, ಮಲ್ಲಿಕಾರ್ಜುನ್, ಕೆ.ಕೆ.ಮಹೇಶ್ ವಸತಿ ನಿಲಯದ ಮೇಲ್ವಿಚಾರಕಿ ಗೀತಾಂಜಲಿ ಹಾಗೂ ಶಾಲಾ ಸಿಬ್ಬಂದಿಗಳು ಇದ್ದರು.

ಕುಪ್ಪಾಳು ಮೂರಾರ್ಜಿ ವಸತಿ ಶಾಲೆಗೆ ಸಂಬಂಧಿಸಿದ ಪೊಕ್ಸೊ ಅಡಿ ಪ್ರಕರಣ ಇಡೀ ಮನುಕುಲವೆ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರವಾಗಿದೆ. ಇಡೀ ಪ್ರಕರಣದ ಬಗ್ಗೆ ತನಿಖೆಯನ್ನು ಕೂಲಂಕುಷವಾಗಿ ನಡೆಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಖಚಿತವಾಗಲಿದೆ. ಇದರ ಜೊತೆಯಲ್ಲಿ ಹಾಸ್ಟೆಲ್‌ನಲ್ಲಿ ಸಮಸ್ಯೆಗಳ ಆಗರವೇ ಆಗಿದ್ದು, ಬಹಳಷ್ಟು ವರ್ಷಗಳಿಂದ ಠಿಕಾಣಿ ಹೂಡಿರುವ ನೌಕರರ ಬದಲಾವಣೆಗೆ ಹಾಗೂ ಹೊರಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿರುವ ನೌಕರರನ್ನು ತೆಗೆದುಹಾಕಲು ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೌಚಾಲಯಗಳ ಹಾಗೂ ಕಟ್ಟಡಗಳ ದುರಸ್ಥಿಗೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಖರೀದಿಗಾಗಿ ಅನುದಾನವನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು
– ಕೆ.ಎಸ್.ಆನಂದ್ ಶಾಸಕ ಕಡೂರು.

Leave a Reply

Your email address will not be published. Required fields are marked *

error: Content is protected !!