ಸುದ್ದಿ ಕಡೂರು : ಚಿತ್ರಕಥೆ, ನಿರ್ದೇಶನ ಲಿಂಗರಾಜು ಹುಚ್ಚಂಗಿ ದುರ್ಗಾ ನಿರ್ದೇಶನ ಹಾಗೂ ಕುಮಾರ್ ಕಂಠೀರವ ನಿರ್ಮಾಣದಲ್ಲಿ ನಾಳೆ ರಾಜ್ಯಾದ್ಯಂತ ತೆರೆಕಾಣಲಿರುವ ಕಡೂರಿನ ಮನೆಮಗ ನಾಟಿಸ್ಟಾರ್ ಧರ್ಮಣ್ಣ ಕಡೂರು ನಾಯಕ ನಟನಾಗಿ ಅಭಿನಯಿಸಿರುವ ರಾಜಯೋಗ ಚಿತ್ರದ ಪ್ರಚಾರದ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳ ಬಳಗದ ವತಿಯಿಂದ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ರಾಮಣ್ಣ, ಸುರೇಶ್, ರಾಜು, ಪ್ರಕಾಶ್, ಹೊನ್ನಪ್ಪ, ವೆಂಕಟೇಶ್, ಸಂಜು, ಪ್ರವೀಣ, ಹರ್ಷಿತ್, ಚೇತನ್ ಇದ್ದರು.