ಭಕ್ತಿಯ ಜೊತೆಗೆ ಜ್ಞಾನವು ಬೇಕು – ಈಶ್ವರಾನಂದಪುರಿ ಸ್ವಾಮೀಜಿ. ಕಡೂರಿನಲ್ಲಿ ಹಟ್ಟಿಯಮ್ಮ ದೇವಾಲಯ ಉದ್ಘಾಟನೆ

ಸುದ್ದಿಕಡೂರು : ಭಕ್ತಿಯ ಜೊತೆಗೆ ಜ್ಞಾನವು ಬೇಕು, ಜ್ಞಾನಬೇಕಾದಲ್ಲಿ ದೇವಾಲಯಗಳ ನಿರ್ಮಾಣಕ್ಕಿಂತ ಶಿಕ್ಷಣ ಸಂಸ್ಥೆಗಳು ಸಮಾಜದಿಂದ ರೂಪುಗೊಳ್ಳಬೇಕಿದೆ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಿಸಿದರು.

ಪಟ್ಟಣದ ದೊಡ್ಡಪೇಟೆಯಲ್ಲಿ ಶುಕ್ರವಾರ ಹಟ್ಟಿಯಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ ಮತ್ತು ಕಳಶಾರೋಹಣ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಕೇವಲ ಧಾರ್ಮಿಕ ಭಕ್ತಿಯಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಅತ್ಯಂತ ಕಡುಬಡತನದಲ್ಲಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಗುಣಮಟ್ಟದ ಶಿಕ್ಷಣವನ್ನು ದೊರಕಿಸಲು ವಿದ್ಯಾಸಂಸ್ಥೆಗಳನ್ನು ನಿರ್ಮಾಣ ಮಾಡಲು ಮುಂದಾಗಬೇಕಿದೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದೇವಾಲಯಗಳ ನಿರ್ಮಾಣದ ಜೊತೆಗೆ ಅದರ ನಿರ್ವಹಣೆಯೂ ಮುಖ್ಯವಾಗಲಿದೆ. ದೇವಾಲಯ ನಿರ್ಮಾಣ ಒಂದು ಸಾಧನೆಯಾಗಿದೆ. ತಾಲ್ಲೂಕಿನಲ್ಲಿ ಕುರುಬ ಸಮಾಜವು ದೊಡ್ಡ ಸಮಾಜವಾಗಿದ್ದು, ಸಣ್ಣ ಸಣ್ಣ ಹಿಂದುಳಿದ ವರ್ಗಗಳ ಸಮಾಜಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ಶೋಷಿತ ಸಮಾಜಗಳಿಗೆ ಸಹಾಯಮಾಡಬೇಕಿದೆ. ಧಾರ್ಮಿಕವಾಗಿ ಕುರುಬ ಸಮಾಜ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುತ್ತ ಬಂದಿದೆ. ಧಾರ್ಮಿಕವಾಗಿ ಪ್ರತಿಯೊಬ್ಬರು ಕೈ ಜೋಡಿಸುವ ಕಾರ್ಯ ಮಾಡಬೇಕಿದೆ. ಯಾವುದೇ ಸಮಾಜಗಳು ಮುಂದೆ ಬರಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಪೇಟೆ ಭಾಗದಲ್ಲಿ ಬಹುತೇಕ ಕುಟುಂಬಗಳು ಒಂದಾಗಿ ಬಾಳುವ ಸೌರ್ಹಾದತೆಯನ್ನು ಬೆಳೆಸಿಕೊಂಡಿದ್ದಾರೆ. ಸಂಬAಧಗಳು ಬೆಳೆಯಲು ಸಹಕಾರಿಯಾಗಿವೆ ಎಂದರು.

ಪುರಸಭಾ ಸದಸ್ಯತೋಟದಮನೆಮೋಹನ್‌ಕುಮಾರ್ ಮಾತನಾಡಿ, ದೇವಾಲಯಗಳ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬ ಭಕ್ತರು ಒಟ್ಟಾಗಿ ಕೆಲಸಗಳನ್ನು ಮಾಡಬೇಕಿದೆ. ಭಕ್ತರು ಸೇರಿ ದೇವಾಲಯಗಳ ನಿರ್ಮಾಣ ಮಾಡಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಕೆಎಚ್‌ಎ ಪ್ರಸನ್ನ, ಕೆ.ಬಿ.ಸೋಮೇಶ್, ಕರಿಬಡ್ಡೆ ಶ್ರೀನಿವಾಸ್, ಹಳೇಪೇಟೆ ತಿಪ್ಪೇಶ್, ಎಂ. ಸೋಮಶೇಖರ್, ಪಂಗ್ಲಿಮAಜುನಾಥ್, ಅಶ್ವಿನಿರವಿ, ಕೆ.ಜಿ.ಲೋಕೇಶ್ವರ್, ನಿರಂಜನ್‌ದಳವಾಯಿ, ಭಂಡಾರಿರವಿ, ರುದ್ರೇಶ, ಶ್ರೀನಿವಾಸ್, ರವಿ ದಂಡಿ, ಪ್ರಕಾಶ್, ಪರಮೇಶ್ವರಪ್ಪ, ಶೇಖರಪ್ಪ, ಪುಟ್ಟಪ್ಪ, ಮಂಜುನಾಥ್, ಕೃಷ್ಣಮೂರ್ತಿ, ಮೋಹನ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!