ಅನಧಿಕೃತವಾಗಿ ಇಟ್ಟುಕೊಂಡಿದ್ದ ಪೆಟ್ಟಿಗೆಅಂಗಡಿಯನ್ನು ತೆರವುಕಾರ್ಯಚರಣೆಗೊಳಿಸಿದ ಕಡೂರು ಪುರಸಭೆ ಸಿಬ್ಬಂದಿ

ಸುದ್ದಿ ಕಡೂರು : ಪಟ್ಟಣದ ಯುಬಿ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಯನ್ನು ಬಿಗಿಪೊಲೀಸ್ ಬಂದೊ ಬಸ್ತ್ನೊಂದಿಗೆ ಪುರಸಭೆಯ ಅಧಿಕಾರಿಗಳು ಜೆಸಿಬಿ ಮೂಲಕ ಶುಕ್ರವಾರ ತೆರವುಗೊಳಿಸುವ ಕಾರ್ಯಚರಣೆ ನಡೆಸಿದರು.

ಈ ಪ್ರದೇಶದಲ್ಲಿ ಅನಧಿಕೃತಪೆಟ್ಟಿಗೆ ಅಂಗಡಿಯನ್ನು ರಾಷ್ಟ್ರೀಯ ಹೆದ್ದಾರಿ 173ರ ಮೂಡಿಗೆರೆ-ಕಡೂರು ರಸ್ತೆಯ ಎಡಭಾಗದಲ್ಲಿ ಹೆದ್ದಾರಿ ರಸ್ತೆಗೆ ಸೇರಿದ ಜಾಗದಲ್ಲಿ ಟೀಅಂಗಡಿಯನ್ನು ನಡೆಸಲಾಗುತ್ತಿತ್ತು. ಪುರಸಭೆಗೆ ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಪವಿಭಾಗ ಬೇಲೂರು ಇವರಿಂದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿಕೊಡುವಂತೆ ಪುರಸಭೆಗೆ ಪತ್ರವನ್ನು ಬರೆದಿದ್ದರು. ಈಗಾಗಲೇ ಹೆದ್ದಾರಿಯ ಅಭಿಯಂತರರು ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಲು ಹಲವಾರು ಬಾರಿ ಸೂಚನೆ ನೀಡಿದ್ದರೂ ತೆರವುಕಾರ್ಯ ಮಾಡದೆ ಇದ್ದುದರಿಂದ ಪುರಸಭೆಗೆ ಬರೆದ ಪತ್ರದ ಹಿನ್ನಲೆಯಲ್ಲಿ ತೆರವು ಕಾರ್ಯ ನಡೆಸಲಾಗಿದೆ ಎಂದು  ಪುರಸಭಾ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್  ಮಾಹಿತಿ ನೀಡಿದರು.

ಇದರ ಜೊತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ಪಕ್ಕದಲ್ಲಿ ಯಾವುದೇ ಪೆಟ್ಟಿಗೆ ಅಂಗಡಿಗಳನ್ನು ಇಡದಂತೆ ತಿಳಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆಯಾಗುತ್ತಿದ್ದನ್ನು ಗಮನಿಸಿ ಅಲ್ಲಿ ಇದ್ದ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು ತಳ್ಳುವ ಗಾಡಿಯಲ್ಲಿ ಮಾತ್ರ ವ್ಯಾಪಾರ ನಡೆಸಿ ರಾತ್ರಿ ತಮ್ಮ ಮನೆಗಳಿಗೆ ಕೈಗಾಡಿಗಳನ್ನು ತೆಗೆದುಕೊಂಡು ಹೋಗಬೇಕಿದೆ. ಸ್ವಚ್ಚತೆಗೆ ಆದ್ಯತೆ ನೀಡಿ ವ್ಯಾಪಾರ ಮಾಡಬೇಕಿದೆ. ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಬೀದಿ ಬದಿಯ ವ್ಯಾಪಾರಸ್ಥರು ಪುರಸಭೆಯೊಂದಿಗೆ ಸಹಕರಿಸಬೇಕಿದೆ ಎಂದರು.

ಪುರಸಭೆ ಆಸ್ತಿ ಕಬಳಿಕೆಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಪತ್ರಿಕೆಗಳಲ್ಲಿ ವರದಿಯಾಗಿರುವ ಹಿನ್ನಲೆಯಲ್ಲಿ ಕಬಳಿಕೆಯಾಗಿರುವ ಪುರಸಭೆ ಆಸ್ತಿಯ ಬಗ್ಗೆ ಪುರಸಭೆ ಆಸ್ತಿ ಎಂದು ನಾಮಫಲಕವನ್ನು ಈಗಾಗಲೇ ಅಳವಡಿಸುವ ಕಾರ್ಯ ಮಾಡಲಾಗಿದೆ. ಫುಟ್‌ಬಾತ್‌ಗಳಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ಸ್ಥಾಪಿಸಿದರೆ ನಿರ್ಧಾಕ್ಷಿಣ್ಯವಾಗಿ ತೆರವುಕಾರ್ಯ ಮಾಡಲಾಗುವುದು. ಮುಕ್ತ ಸಂಚಾರಕ್ಕೆ ಫುಟ್‌ಬಾತ್ ರಸ್ತೆಗಳು ಮುಖ್ಯವಾಗಲಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ಸುಗಮಗೊಳಿಸಲು ಕೆಲವಾರು ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಪುರಸಭೆಯ ಅಧಿಕಾರಿಗಳು, ಪೌರಸೇವಾ ನೌಕರರು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

 

Leave a Reply

Your email address will not be published. Required fields are marked *

error: Content is protected !!