ಡಿ.25ಕ್ಕೆ ಕಡೂರಿನಲ್ಲಿ ಅದ್ದೂರಿಯ ಕನಕಜಯಂತ್ಯೋತ್ಸವ ಆಚರಣೆ – ಹೋಚಿಹಳ್ಳಿ ಭೋಗಪ್ಪ

ಸುದ್ದಿ ಕಡೂರು :  ಈ ಬಾರಿಯ 536ನೇ ಶ್ರೀ ಭಕ್ತ ಕನಕದಾಸರ ಮಹೋತ್ಸವವನ್ನು ಡಿ.25ರಂದು ತಾಲ್ಲೂಕು ಕುರುಬ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದು ತಾಲ್ಲೂಕು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಕುರುಬ ಸಮಾಜದ ವತಿಯಿಂದ ಕನಕಜಯಂತಿ ಆಚರಣೆ ಮಹೋತ್ಸವದ ಕರಪತ್ರವನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗಾಗಲೇ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನ.30ರ ಗುರುವಾರದಂದು ನಡೆಯುವ ಕನಕದಾಸರ ಜಯಂತಿ ಸರಕಾರಿ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಆಚರಣೆ ನಡೆಸಲಾಗುತ್ತದೆ. ಅಂದಿನ ತಾಲ್ಲೂಕು ಆಡಳಿತದ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಗುತ್ತದೆ ಎಂದರು.
ಡಿ.25ರಂದು 536ನೇ ಕನಕದಾಸರ ಆಚರಣಾ ಮಹೋತ್ಸವ ಸಮಿತಿಯ ವತಿಯಿಂದ ನಡೆಯುವ ಸಮಾರಂಭದಲ್ಲಿ ಸಚಿವದ್ವಯರು ಹಾಗೂ ಕ್ಷೇತ್ರದ ಶಾಸಕರು ಸೇರಿದಂತೆ ಮಾಜಿ ಶಾಸಕರು, ರಾಜ್ಯ ಮಟ್ಟದ ನಾಯಕರುಗಳು, ವಿವಿಧ ಸಮಾಜದ ಪೂಜ್ಯಶ್ರೀಗಳು ಮತ್ತು ಎಲ್ಲಾ ಸಮಾಜದ ಅಧ್ಯಕ್ಷರು ಹಾಗೂ ಮುಖಂಡರುಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಸಮಾಜದ ಮುಖಂಡರು ಹಾಗೂ ಬಂಧುಗಳು ಎರಡು ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಅವರು. ಕನಕ ಜಯಂತಿ ನಂತರ ಹೋಬಳಿವಾರು ಸಭೆ ನಡೆಸಿ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

536ನೇ ಕನಕಜಯಂತಿ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಡಿ.25ರಂದು ನಡೆಯುವ ಜಯಂತಿ ಸಮಾರಂಭಕ್ಕೆ ಹಲವು ರೂಪುರೇಷೆಗಳೊಂದಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ವ್ಯವಸ್ಥಿತವಾದ ಸಮಾರಂಭಕ್ಕಾಗಿ ವಿವಿಧ ಉಪಸಮಿತಿಗಳನ್ನು ರಚಿಸಿಕೊಳ್ಳಲಾಗುತ್ತಿದೆ. ಪಟ್ಟಣದ ಸಂಗೊಳ್ಳಿರಾಯಣ್ಣ ವೇದಿಕೆಯಲ್ಲಿ 536ನೇ ಕನಕದಾಸ ಜಯಂತಿಯನ್ನು ಆಚರಿಸಲಾಗುವುದು. ತಾಲೂಕಿನ ಸಮಾಜ ಬಾಂಧವರು ತನು, ಮನ ಮತ್ತು ಧನದ ಸಹಕಾರದೊಂದಿಗೆ ಸಮಾರಂಭದ ಯಶಸ್ಸಿಗೆ ಕೈ ಜೋಡಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಭಂಡಾರಿಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ, ಪ್ರಧಾನಕಾರ್ಯದರ್ಶಿ ಕೆ.ಎಚ್.ಶಂಕರ್, ಉಪಾಧ್ಯಕ್ಷ ಕೆ.ಜಿ.ಶ್ರೀನಿವಾಸ್ ಮೂರ್ತಿ, ಕೆ.ಬಿ.ಸೋಮೇಶ್, ಕಂಸಾಗರರೇವಣ್ಣ, ಎನ್.ಎಚ್. ನಂಜುಂಡಸ್ವಾಮಿ, ಈರಳ್ಳಿ ರಮೇಶ್, ಸಮಾಜದ ವಕ್ತಾರ ಕೆ.ಜಿ.ಲೋಕೇಶ್ವರ್, ಖಜಾಂಚಿ ಕೆ.ಆರ್.ಸುರೇಶ್, ಸಿದ್ದಪ್ಪ, ಅಶ್ವಿನಿ ರವಿ, ತ್ಯಾಗರಾಜ್, ಕೆ.ಎಸ್. ಮಂಜುನಾಥ್, ಭಂಡಾರಿರವಿ, ಗೋವಿಂದಪ್ಪ, ಶ್ರೀನಿವಾಸ್, ಹಳೇಪೇಟೆ ತಿಪ್ಪೇಶ್, ಚಂದ್ರಪ್ಪ, ಕಿರಣ್, ರಂಗನಾಥ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!