ಏನ್ರಿ ಕಾಲೇಜಿನ ವ್ಯವಸ್ಥೆ? ಕಾನ್ಫಿಡೆಂಟ್‌ ಕಾಲೇಜಿನ ಅವ್ಯವಸ್ಥೆಯ ಬಗ್ಗೆ ಪೋಷಕರು ಗರಂ!

ಸುದ್ದಿಕಡೂರು: ಪಟ್ಟಣದ ಉಳುಕಿನಕಲ್ಲು ಭಾಗದಲ್ಲಿರುವ ಕಾನ್ಫಿಡೆಂಟ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅವ್ಯವಸ್ಥೆ ಖಂಡಿಸಿ ಸೋಮವಾರ ಪ್ರತಿಭಟನೆ ಮಾಡಿದರು.

ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಮೊದಲ ಮತ್ತು ಎರಡನೇ ಪಿಯುಸಿಯಲ್ಲಿ ಸುಮಾರು 102ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. ಮೂಲಭೂತ ಸೌಕರ್ಯ ಮತ್ತು ಸಿಬ್ಬಂಧಿ ಕೊರತೆಯಿಂದಾಗಿ ಪಾಠ,ಪ್ರವಚನಗಳು ಸರಿಯಾಗಿ ನಡೆಯದ ಕಾರಣ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ಮಾಡಿದರು.

ಈಗಾಗಲೇ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವ ಹಂತ ತಲುಪಿದ್ದರೂ ಲ್ಯಾಬ್‌ಗಳು ನಡೆದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಅಲ್ಲದೆ ಕೆಮಿಸ್ಟಿç ಮತ್ತು ಗಣಿತ ವಿಷಯಗಳ ಪಾಠಗಳು ಸಹ ಬಾಕಿ ಉಳಿದಿದ್ದು ಉಪನ್ಯಾಸಕರ ಕೊರತೆಯಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ದೂರಿದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಆಡಳಿತ ಮಂಡಳಿಯ ವಿರುದ್ದ ತರಾಟೆ ತೆಗೆದುಕೊಂಡರು

ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥ ಬೀರೂರು ವಿನಾಯಕ್ ಅವರು ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿ ಆಲಿಸಿ ಒಂದು ವಾರದೊಳಗೆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಪಾಠ ಪ್ರವಚನಗಳು ಕಾಲಕ್ಕೆ ಸರಿಯಾಗಿ ಸಾಗುವಂತೆ ಮಾಡುವುದಾಗಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಸ್ಥಳದಲ್ಲಿದ್ದ ಪೋಷಕರು ಒಂದು ವಾರದ ಗಡುವು ನೀಡಿ ಮಕ್ಕಳಿಗೆ ಯಾವುದೇ ಸಮಸ್ಯೆಗಳು ತಲೆದೋರಿದರೆ ಆಡಳಿತ ಮಂಡಳಿಯನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದಾಗಿ ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!