ನ.29ಕ್ಕೆ ಬೀರೂರಿನಲ್ಲಿ ಆಟೋ ಸಂಘದಿಂದ ಕನ್ನಡರಾಜ್ಯೋತ್ಸವ

ಸುದ್ದಿ ಬೀರೂರು : .ನ.29ರ ಬುಧವಾರ ಶ್ರೀ ಸಂಗೊಳ್ಳಿರಾಯಣ್ಣ ರಂಗಮಂದಿರದಲ್ಲಿ ಈ ಬಾರಿಯ 68ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ ಎಂದು ಆಟೋ ಚಾಲಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಬಿ.ಹೆಚ್.ಶ್ರೀನಿವಾಸ್ ತಿಳಿಸಿದ್ದಾರೆ.

ಬೆಳಗ್ಗೆ 8-30ಕ್ಕೆ ಧ್ವಜಾರೋಹಣ ವನ್ನು ಪುರಸಭೆ ಮಾಜಿ ಸದಸ್ಯ ಮಾರ್ಗದ ಮಧು ನೇರವೇರಿಸಲಿದ್ದು, ಅಧ್ಯಕ್ಷತೆಯನ್ನು ಆಟೋ ಸಂಘದ ಗೌರವಾಧ್ಯಕ್ಷ ಬಿ.ಕೆ.ಶಶಿಧರ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಪುರಸಭೆ ಮಾಜಿ ಅಧ್ಯಕ್ಷ ವಿ.ಜಯರಾಂ ನಡೆಸಲಿದ್ದಾರೆ.
ಮುಖ್ಯ ಅಥಿಗಳಾಗಿ ಎಸ್.ಕುಮಾರಸ್ವಾಮಿ, ರವಿಕುಮಾರ್, ಕೆ.ಎಂ.ಜಯಪ್ರಕಾಶ್, ಪಿಎಸೈ ಸಚಿತ್ ಕುಮಾರ್, ಮುಗಳಿಕಟ್ಟೆ ಲೋಕೇಶ್, ಕೇಶವಣ್ಣ ಭಾಗವಹಿಸಲಿದ್ದು,. ನಂತರ ಬೆ.10-30ಕ್ಕೆ ಶ್ರೀ ಭುವನೇಶ್ವರಿಯ ಭವ್ಯ ಮೆರವಣಿಗೆಯನ್ನು ಪಟ್ಟಣದಾದ್ಯಂತ ನಡೆಸಲಾಗುವುದು. ಸಂಜೆ 5-30ಕ್ಕೆ ವೇದಿಕೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಬಿ.ಹೆಚ್.ಶ್ರೀನಿವಾಸ್ ವಹಿಸಲಿದ್ದು.ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ.ದತ್ತ, ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್ ಹಾಗೂ ಕೆ.ಎಂ.ವಿನಾಯಕ್ ಮತ್ತು ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆಯನ್ನು ಅಕ್ಷತಗಿರೀಶ್ ನಡೆಸಲಿದ್ದು, ಪ್ರಧಾನ ಭಾಷಣಕಾರರಾಗಿ ಕನ್ನಡ ಸಹಾಯಕ ಪ್ರಾಧ್ಯಪಕರಾದಂತಹ ಡಾ.ಆನಂದ್, ಭಂಡಾರಿ ಶ್ರೀನಿವಾಸ್, .ಎಂ.ಮೋಹನ್ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗಾಳಿಹಳ್ಳಿಯ ಮಾಜಿ ಸೈನಿಕರಾದ ಎಂ.ನರಸಿಂಹಮೂರ್ತಿ, ಕನ್ನಡಪ್ರಭ ಪತ್ರಿಕೆ ವರದಿಗಾರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಗಿರೀಶ್, ಸರ್ಕಾರಿ ಆಸ್ಪತ್ರೆ ಶೂಶ್ರೂಷಕಿ ವಳ್ಳಿ, ಮತ್ತು ಪುರಸಭೆಯ ಪೌರಕಾರ್ಮಿಕರಾದ ಕೊಂಗನಾಟರವರುಗಳಿಗೆ ಆಟೋ ಸಂಘದಿಂದ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಕಾಮಿಡಿ ಕಿಲಾಡಿ ಕಲಾವಿದರಾದ ಅಪ್ಪಣ್ಣ, ಮಿಂಚು ಮಂಡ್ಯ, ಪ್ರವೀಣ್ ರವರಿಂದ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

 

ವಿದ್ಯುತ್ ಅಲಂಕಾರದಿಂದ ಜಗಮಿಸುತ್ತಿರುವ ಮಹಾತ್ಮಗಾಂಧಿ ವೃತ್ತ:
ರಾಜ್ಯೋತ್ಸವದ ಹಿನ್ನಲೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆಯೇ ಪಟ್ಟಣದ ಹೃದಯಭಾಗದಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಕರ್ನಾಟಕ ನಕ್ಷೆಗೆ ಹಳದಿಮತ್ತು ಕೆಂಪು ದೀಪಾಲಂಕರಿಸಿದರೆ ಎಲ್ಲೆಡೆ ಹಳದಿ ಮತ್ತು ಕೆಂಪು ಬಗೆಯ ಬಾವುಟಗಳು ರಾರಾಜಿಸುತ್ತಾ ಕನ್ನಡಾಭಿಮಾನಿಗಳ ಹೃದಯಸ್ಪರ್ಷಿಸುತ್ತಿವೆ.

Leave a Reply

Your email address will not be published. Required fields are marked *

error: Content is protected !!