ಜ,15ಕ್ಕೆ ಯಗಟಿಪುರದಲ್ಲಿ ತಾಲ್ಲೂಕು ಜಾನಪದ ಸಮ್ಮೇಳನ – ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್

ಸುದ್ದಿ ಕಡೂರು : ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಮಟ್ಟದ ಎರಡನೇ ಜಾನಪದ ಸಮ್ಮೇಳನವನ್ನು ತಾಲ್ಲೂಕಿನ ಯಗಟಿಪುರದಲ್ಲಿ ಜ.15ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ತಿಳಿಸಿದರು.
ಪಟ್ಟಣದಲ್ಲಿ  ಮಾತನಾಡಿ, ಈ ಬಾರಿಯ 2ನೇ ತಾಲ್ಲೂಕು ಮಟ್ಟದ ಜಾನಪದ ಸಮ್ಮೇಳನಕ್ಕೆ ಕುಂಕನಾಡಿನ ಜಾನಪದ ಕಲಾಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ. ಓಂಕಾರಮೂರ್ತಿ ಅವರನ್ನು ಸಮ್ಮೇನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಓಂಕಾರಮೂರ್ತಿ ಅವರು ಜಾನಪದ ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಜಾಗೃತ ಗ್ರಾಮ ವಿಕಾಸ ಸಂಘದ ಮೂಲಕ ಜನರಲ್ಲಿ ಅರಿವನ್ನು ಮೂಡಿಸುವ ಮೂಲಕ ಕ್ರೀಯಾಶೀಲರಾಗಿದ್ದು, ಜಾನಪದ ಚಿತ್ರಗಳು, ಕೆತ್ತನೆಗಳು, ಮಣ್ಣಿನಮೂರ್ತಿ, ಗೊಂಬೆಗಳನ್ನು ತಯಾರಿಸಿಕೊಂಡು ಜನಪದದ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಜ.15ರAದು ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುವ ಸಮ್ಮೇಳನದಲ್ಲಿ ಬೆಳಿಗ್ಗೆ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಅದ್ದೂರಿಯ ಮೆರವಣಿಗೆ, ಜಾನಪದ ಗೋಷ್ಠಿಗಳು, ರಾಜ್ಯಮಟ್ಟದ ಕಲಾವಿದರಿಂದ ಜನಪದ ಗೀತಗಾಯನಗಳು ನಡೆಯಲಿವೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾದ್ಯಂತ ಹೆಸರಾಂತ ಕಲಾವಿದರಿಂದ ಕೋಲಾಟ, ಜಾನಪದ ನೃತ್ಯ, ಕಂಸಾಳೆ, ಪೂಜಾ ಕುಣಿತ, ವೀರಗಾಸೆ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಸಮ್ಮೇಳನವನ್ನು ಕ್ಷೇತ್ರದ ಶಾಸಕರಾದ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ಸಾಹಿತಿಗಳು ಹಾಗೂ ಗಣ್ಯರುಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಸಂಜೆ 7 ಗಂಟೆಯಿAದ ಜನಪದ ನಾಟಕ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ಸಮ್ಮೇಳನದಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ಹಿರಿಯ ಜಾನಪದ ಕಲಾವಿದರನ್ನು ಗೌರವಿಸಲಾಗುತ್ತದೆ. ಜಾನಪದ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಸಮ್ಮೇಳನವನ್ನು ಆಯೋಜಿಸಲಾಗಿದೆ. ನಮ್ಮ ಜಾನಪದ ಸಂಸ್ಕೃತಿ ಉಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಬೆಳೆಸಲು ಜಾನಪದ ಪರಿಷತ್ತಿನ ತಾಲ್ಲೂಕು ಘಟಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುಂಕನಾಡು ನಾಗರಾಜು, ಪದಾಧಿಕಾರಿಗಳಾದ ಮಲಿಯಪ್ಪ, ಪರಮೇಶ್ವರಪ್ಪ, ನಾಗರಾಜ್, ಚಿಕ್ಕನಲ್ಲೂರು ಜಯಣ್ಣ, ಚಂದ್ರಪ್ಪ, ಶ್ರೀನಿವಾಸ್, ಪಂಚನಹಳ್ಳಿ ಲೋಕೇಶ್, ತಿಮ್ಮೇಶ್, ಯಗಟಿಶಂಕರ್, ಶುಭ, ಶೋಭ, ಪುಷ್ಪ, ಮಂಜಮ್ಮ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!