ಅವಿರೋಧವಾಗಿ ಆಯ್ಕೆಗೊಂಡ ಕಡೂರು ಟೌನ್ ಕೋಅಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿ

ಸುದ್ದಿಕಡೂರು : ಪಟ್ಟಣದ ಟೌನ್ ಕೋ ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಯಾದ ಸಹಕಾರ ಸಂಘದ ಅಭಿವೃದ್ದಿ ಅಧಿಕಾರಿ ಅನುಪಮ ತಿಳಿಸಿದರು.

ಪಟ್ಟಣದ ಸೊಸೈಟಿಯ ಕಚೇರಿಯಲ್ಲಿ ಬುಧವಾರ ಮಾಹಿತಿ ನೀಡಿ ಮಾತನಾಡಿ, ಡಿ.24ರಂದು ನಡೆಯಬೇಕಿದ್ದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ

ಕೆ.ಬಿ. ಸೋಮೇಶ್, ಕೆ.ಎಚ್. ರವಿ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಅಜಯ್‌ಕುಮಾರ್‌ಒಡೆಯರ್, ಕೆ.ಜಿ.ಪ್ರದೀಪ್, ಫೈರೋಜ್ ಖಾನ್, ವಿ.ಎಂ. ಪ್ರಸಾದ್ (ಸಾಮಾನ್ಯ ಕ್ಷೇತ್ರಗಳು),

ಕೆ.ಜಿ.ಲೋಕೇಶ್ವರ್(ಬಿಸಿಎಂ-ಎ),

ಯು.ಟಿ. ಸುಶೀಲ ಶ್ರೀನಿವಾಸ್, ಕಲ್ಪನಾ ಲವಕುಮಾರ್, (ಮಹಿಳಾ ಮೀಸಲು),

ಆರ್. ಚಂದ್ರುಶೇಖರ್(ಪರಿಶಿಷ್ಟಜಾತಿ),

ಕೆ.ಕೆ. ಮಂಜು(ಪರಿಶಿಷ್ಟ ಪಂಗಡ)

ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಪ್ರಕ್ರಿಯನ್ನು ಕ್ರಮಬದ್ದವಾಗಿ ನಡೆಸಲಾಗಿದೆ. ಬಿಸಿಎಂ-ಬಿ ಕ್ಷೇತ್ರದ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಖಾಲಿ ಉಳಿಸಲಾಗಿದೆ, ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರುಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸೊಸೈಟಿಯ ಕಾರ್ಯದರ್ಶಿ ಚನ್ನಕೇಶವಮೂರ್ತಿ ಇದ್ದರು.

  ಹ್ಯಾಟ್ರಿಕ್ ಗೆಲುವು ಪಡೆದ ಆಡಳಿತ ಮಂಡಳಿಯ ತಂಡ! : ಟೌನ್‌ ಕೋ ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಲ್ಲಿ ಬಹುತೇಕ ಹಳೆಯ ನಿರ್ದೇಶಕರು ಮರು ಆಯ್ಕೆಗೊಂಡ ಹಿನ್ನಲೆಯಲ್ಲಿ ಸೊಸೈಟಿಯ ಹಿರಿಯ ನಿರ್ದೇಶಕರಾದ ಕೆ.ಬಿ.ಸೋಮೇಶ್ ಮತ್ತು ಕೆ.ಎಚ್. ರವಿ ಅವರ ತಂಡವು ಮೈಲುಗೈ ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳು ಆಯ್ಕೆಗೊಂಡಂತಾಗಿದೆ.

Leave a Reply

Your email address will not be published. Required fields are marked *

error: Content is protected !!