ಕಡೂರು ಪುರಸಭೆಗೆ 28.59 ಲಕ್ಷ ಉಳಿತಾಯದ ಬಜೆಟ್‌

ಸುದ್ದಿ ಕಡೂರು : ಪಟ್ಟಣದ ರಸ್ತೆ, ಚರಂಡಿ ಮೂಲಭೂತ ಸವಲತ್ತುಗಳು ಹಾಗೂ ಘನ ತಾಜ್ಯ ನಿರ್ವಹಣೆಯ ವಿಭಾಗಗಳು, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಮುಂತಾದ ಪ್ರಮುಖ ಅಂಶಗಳ ಒಳಗೊಂಡ 28.59 ಲಕ್ಷ ರೂಗಳ ಉಳಿತಾಯದ ಬಜೆಟ್‌ನ್ನು ಪುರಸಭಾ ಆಡಳಿತಾಧಿಕಾರಿ ತರೀಕೆರೆ ಎಸಿ ಕಾಂತರಾಜ್ ಮಂಡಿಸಿದ್ದಾರೆ.

ಪುರಸಭಾ ಕಚೇರಿಯಲ್ಲಿ 2024-25ನೇ ಸಾಲಿನ ಅಯವ್ಯಯದ ಬಜೆಟ್ ಮಂಡಿಸಿ ಈ ಸಾಲಿನ ಪುರಸಭೆಯ ಆಯ-ವ್ಯಯದ ಬಾಬ್ತಿನಲ್ಲಿ 38.53 ಕೋಟಿ ಆದಾಯ ಮತ್ತು 38.25 ಕೋಟಿ ವೆಚ್ಚದ ನಿರೀಕ್ಷೆಯನ್ನು ಹೊಂದಲಾಗಿದೆ. ಪುರಸಭೆಯ ಸ್ವಂತ ಮೂಲಗಳಿಂದ 4.76 ಕೋಟಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ 8.64 ಕೋಟಿಯಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸರಕಾರದ ಎಸ್‌ಎಫ್‌ಸಿ ವೇತನ ಅನುದಾನ 2.75 ಕೋಟಿ ಮತ್ತು ಎಸ್‌ಎಫ್‌ಸಿ ವಿದ್ಯುತ್ ಅನುದಾನವನ್ನು 10.65 ಕೋಟಿ ನಿರೀಕ್ಷಿಸಲಾಗಿದೆ. ಕುಡಿಯುವ ನೀರು ಮತ್ತು ಘನತಾಜ್ಯ ವಸ್ತು ನಿರ್ವಹಣೆಗೆ ಅಗತ್ಯ ಕ್ರಮವಹಿಸಲು 3.55 ಕೋಟಿ ಹಾಗೂ ರಸ್ತೆ-ಚರಂಡಿ ನಿರ್ವಹಣೆಗಾಗಿ 4 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ ಹಾಗೂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!