ಸುಸಂಪನ್ನಗೊಂಡ ಯಗಟಿಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ: ರಥಕ್ಕೆ ಕಾಳುಮೆಣಸು ಎರಚಿ ಹರಕೆ ಸಮರ್ಪಿಸಿದ ಭಕ್ತರು

ಸುದ್ದಿ ಕಡೂರು : ತಾಲ್ಲೂಕಿನ ಇತಿಹಾಸ ಪ್ರಸಿದ್ದ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿ0ದ ಸುಸಂಪನ್ನಗೊ0ಡಿತು.
ಪಿ. ಕೋಡಿಹಳ್ಳಿಯ ಮೂಲ್ವೀಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಮಂಟಪಕ್ಕೆ ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಟಾಪಿಸಿ ವಿಧಿ ವಿಧಾನಗಳ ಬಲಿಪೂಜೆಯ ನಂತರ ಮಧ್ಯಾಹ್ನ 2-00 ಗಂಟೆಗೆ ನೆರೆದಿದ್ದ ಸಾವಿರಾರು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಮಲ್ಲಪ್ಪನಿಗೆ ಜೈಕಾರ ಕೂಗುತ್ತಾ ಈ ಬಾರಿಯ ತಾಲ್ಲೂಕಿಗೆ ಸಮೃದ್ದ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿ ಬಾಳೆಹಣ್ಣುಗಳನ್ನು ಎಸೆದರೆ, ಮತ್ತೆ ಕೆಲವರು ವೈಯಕ್ತಿಕ ಹರಕೆಯನ್ನು ಕಟ್ಟಿಕೊಂಡ ಭಕ್ತರು ಮಂಡಕ್ಕಿಯೊಳಗೆ ಮೆಣಸಿನ ಕಾಳನ್ನು ರಥಕ್ಕೆ ಎರೆಚಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಸ್ವಾಮಿಯ ರಥೋತ್ಸವ ಜರುಗಿದ ನಂತರ ಪಿ.ಕೋಡಿಹಳ್ಳಿಯ ಮೂಲ್ವೀಕರಿಂದ ಹಾಗೂ ಗ್ರಾಮೀಣ ಭಾಗದ ಭಕ್ತರು ತಮ್ಮ ಸಿಂಗಾರಗೊ0ಡ ಪಾನಕದಗಾಡಿಗಳನ್ನು ಸ್ವಾಮಿಯ ದೇವಾಲಯದ ಬಳಿ ವರೆಗೆ ಮೆರವಣಿಗೆ ನಡೆಸಿ ನಂತರ ರಥದ ಬಳಿ ಬಂದು ಸಾಂಪ್ರಾದಾಯಿಕವಾಗಿ ಮೂರು ಸುತ್ತು ಪ್ರದಕ್ಷಿಣೆಹಾಕಿ ಸಂಭ್ರಮಿಸಿದರು.

 

Leave a Reply

Your email address will not be published. Required fields are marked *

error: Content is protected !!