ಕನ್ಯಾಭಾಗ್ಯ ಕರುಣಿಸು ಸ್ವಾಮಿ : ಇಲ್ಲವಾದಲ್ಲಿ ಮಠ ಸೇರುತ್ತೇವೆಂದು! ಯುವಕರ ವಿಶೇಷ ಪ್ರಾರ್ಥನೆ

 ಸುದ್ದಿ ಚಿಕ್ಕಮಗಳೂರು: ಖಾಂಡ್ಯಾ ಹೋಬಳಿ ಭಾಗದ ಬ್ಯಾಡಿಗೆರೆ ಗ್ರಾಮದಲ್ಲಿ ಮದುವೆ ಆಗದೇ ಉಳಿದ 25ರಿಂದ 38ವರ್ಷದ ಯುವಕರೀಗೆ ಮದುವೆ ಆಗಲೆಂದು ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದಾರೆ.

ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮದುಕುಮಾರ್ ಶಾಸ್ತ್ರಿ ಸುಮಾರು 30 ಬ್ರಹ್ಮಚಾರಿ ಯುವಕರ ಪಟ್ಟಿ ಮಾಡಿ, ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ. ಸುಗ್ಗಿ ಜಾತ್ರಾ ಮಹೋತ್ಸವದ 4ನೇ ದಿನ ಈ ಕಾರ್ಯ ಮಾಡಲಾಗಿದೆ.

ತಮಗೆ ಹುಡುಗಿ ಸಿಗದೇ ಇದ್ದಲ್ಲಿ ಮಠಕ್ಕೆ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿಯವರಿಗೆ ಹೇಳಿ ಯುವಕರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!