ದೇವೇಗೌಡರು ಈಗ ಕೋಮುವಾದಿಗಳ ಜೊತೆ ಕೈ ಜೋಡಿಸುವ ಪರಿಸ್ಥಿತಿಗೆ ತರಲು ಅವರ ಕುಟುಂಬದ ಮಕ್ಕಳೇ ಕಾರಣೀಭೂತರು – ಶಿವಲಿಂಗೇಗೌಡ

ಸುದ್ದಿ ಕಡೂರು: ಜಾತ್ಯಾತೀತ ಸಿದ್ದಾಂತ ಪ್ರತಿಪಾದಿಸುತ್ತಿದ್ದ ದೇವೇಗೌಡರು ಈಗ ಕೋಮುವಾದಿಗಳ ಜೊತೆ ಕೈ ಜೋಡಿಸುವಂತಹ  ಇಕ್ಕಟ್ಟಿನ ಪರಿಸ್ಥಿತಿಗೆ ತರಲು ಅವರ ಕುಟುಂಬದ ಮಕ್ಕಳೇ ಕಾರಣೀಭೂತರಾಗಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಶಿವಲಿಂಗೇಗೌಡ ಕಿಡಿಕಾರಿದರು.

ಕಡೂರಿನಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿ,
ಕೋಮುವಾದಿಗಳ ಬೆಂಬಲ ಪಡೆಯುವುದಿಲ್ಲ ಎಂದು ಪ್ರದಾನಿ ಪಟ್ಟವನ್ನೆ ತ್ಯಜಿಸಿದ್ದ ದೇವೇಗೌಡರನ್ನು ಕೇವಲ ಮೂರು ಸ್ಥಾನಕ್ಕೋಸ್ಕರ ಅದೇ ಕೋಮುವಾದಿ ಪಕ್ಷದ ಜೊತೆ ಹೋಗುವಂತೆ ಮಾಡಿ ದೈನೇಸಿ ಸ್ಥಿತಿಗೆ ತಂದವರು ಯಾರು ಎಂಬುದು ರಾಜ್ಯದ ಜನತೆಗೆ ತಿಳಿದಿದೆ.ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಮೀನಾಮೇಷ ಎಣಿಸಿತು. ರಾಜ್ಯಕ್ಕೆ ನ್ಯಾಯವಾಗಿ ಕೊಡಬೇಕಾದ ಹಣವನ್ನು ಕೊಡಿಸಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮೊರೆಹೋಗಿದೆ. ಒಕ್ಕೂಟ ವ್ಯವಸ್ಥೆ ಯಲ್ಲಿ ಯಾವುದೇ ರಾಜ್ಯ ತೊಂದರೆಗೊಳಗಾದರೆ ಕೇಂದ್ರ ಸಹಾಯಕ್ಕೆ ಧಾವಿಸಬೇಕು ಎಂದು ಸಂವಿಧಾನದಲ್ಲೆ ಉಲ್ಲೇಖವಾಗಿದೆ. ನಮಗೆ ಅಲ್ಲಿ ನ್ಯಾಯ ಸಿಗಲಿದೆ. ಇಷ್ಟು ಭಂಡ ಸರ್ಕಾರವನ್ನು ಎಂದೂ ನೋಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮಾನ‌ಮರ್ಯಾದೆ ಇದ್ದರೆ ರಾಜ್ಯದ ಪಾಲನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪಕ್ಷದ ದುರಾಡಳಿತ ಮತ್ತು ಸ್ವಾಭಿಮಾನದ ನಡುವಿನ ಚುನಾವಣೆ ಇದಾಗಿದೆ. ಪುಟ್ಟಸ್ವಾಮಿ ಗೌಡರು ಮತ್ತು ದೇವೇಗೌಡರ ಕುಟುಂಬದ ನಡುವಿನ ಹೋರಾಟದ ಚುನಾವಣೆಯೂ ಹೌದು.ಇದರಲ್ಲಿ ಶ್ರೇಯಸ್ ಪಟೇಲ್ ಗೆದ್ದು ಸಂಸದರಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪ್ರಜ್ವಲ್ ಪರವಾಗಿ ದುಡಿದಿದ್ದೆವು. ಈಗ ಬಿಜೆಪಿ ಜೊತೆ ಯಿದ್ದಾರೆ. ಕಡೂರನ್ನು ಕಡೆಗಣಿಸಿಕೊಂಡೇ ಬಂದರು. ತೊಂದರೆಗೊಳಗಾದ ಸಮಯದಲ್ಲೂ ಬಂದು ಜನರಲ್ಲಿ ಆತ್ಮಸ್ಥೈರ್ಯ ತುಂಬಲಿಲ್ಲ. ಪ್ರಜ್ವಲ್ ಅವರಿಗೆ ಸಂಸದ ಸ್ಥಾನದ ಅವಶ್ಯಕತೆಯಿಲ್ಲ. ಇಲ್ಲಿ ನಮಗೆ ಖಾಲಿ ಸಂಸದರು ಬೇಕಿಲ್ಲ. ಬಿಜೆಪಿ ಮತದಾರರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಾಗೆಂದು ಏಕಪಕ್ಷೀಯವಾಗಿ ಪ್ರಜ್ವಲ್ ಅನ್ನು ಜನತೆ ಬೆಂಬಲಿಸುತ್ತಾರೆಂದು ತಿಳಿಯಲು ಸಾಧ್ಯವಿಲ್ಲ. ಚಿಕ್ಕಮಗಳೂರು ಕ್ಷೇತ್ರದಲ್ಲಿದ್ದಾಗ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಡಿ.ಸಿ.ಶ್ರೀಕಂಠಪ್ಪ ನವರನ್ನು ಜನ ಬೆಂಬಲಿಸಿದ ರೀತಿಯಲ್ಲೆ ಹಾಸನ ಲೋಕಸಭಾ ಕ್ಷೇತ್ರದ ಜನತೆ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುತ್ತಾರೆ. ಇದರಲ್ಲಿ ಸಂಶಯವಿಲ್ಲ. ಕಡೂರು ಕ್ಷೇತ್ರದಲ್ಲಿ ನನ್ನನ್ನು ಬೆಂಬಲಿಸಿದ ಜನತೆ ಅಷ್ಟೇ ಪ್ರಮಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವುದು ನಿಶ್ಚಿತ.ಈ ಬಾರಿ ಜಾತಿ,ಹಣದ ಬಲ ನಡೆಯುವುದಿಲ್ಲ. ಕೆಲಸ ಮಾಡುವವರ ಮತ್ತು ಮಾಡದವರ ನಡುವೆ ಈ ಚುನಾವಣೆ ಎಂದರು.

ನಿಯೋಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ ಕ್ಷೇತ್ರದಲ್ಲಿರುವ ಕಡೂರು ಸಂಸದರ ಅವಗಣನೆಗೆ ತುತ್ತಾಗಿದೆ ಎಂಬ ಮಾತನ್ನು ಪ್ರಜ್ವಲ್ ನಿಜಮಾಡಿದ್ದಾರೆ. ನಾಲ್ಕೈದು ಬಾರಿ ಬಿಟ್ಟರೆ ಮತ್ತೆ ಕಡಾಉರೊನ ಕಡೆ ಬರಲಿಲ್ಲ. ಆದರೆ ಇನ್ನು ಮುಂದೆ ಈ ಬೇಸರವನ್ನು ಹೋಗಲಾಡಿಸುತ್ತೇನೆ. ಕಡೂರಿಗೆ ವಿಶೇಷ ಗಮನ ಹರಿಸುತ್ತೇನೆ. ಒಟ್ಟಾರೆಯಾಗಿ ಹಾಸನ ಲೋಕಸಭಾ ಕ್ಷೇತ್ರದ ಸಂಸದನಾಗಿ ಕ್ಷೇತ್ರದ ಚಿತ್ರಣವನ್ನು ಬದಲಿಸುವ ಅವಕಾಶ ನನಗೆ ದೊರೆಯಲಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಸಂದಿ ಕಲ್ಲೇಶ್ ಮತ್ತು ಬಾಸೂರು ಚಂದ್ರಮೌಳಿ, ಪುರಸಭಾ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಈರಳ್ಳಿ ರಮೇಶ್, ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!